KPWD Assistant Executive Engineer Recruitment 2024: ಲೋಕೋಪಯೋಗಿ ಇಲಾಖೆಯಲ್ಲಿ 42 ಹುದ್ದೆಗಳ ನೇಮಕಕ್ಕೆ ಆದೇಶ

KPWD Assistant Executive Engineer Recruitment 2024: ಲೋಕೋಪಯೋಗಿ ಇಲಾಖೆಯಲ್ಲಿ 42 ಹುದ್ದೆಗಳ ನೇಮಕಕ್ಕೆ ಆದೇಶ

ಸ್ನೇಹಿತರೇ, ಕರ್ನಾಟಕ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ (KPWD) ನಲ್ಲಿ ಖಾಲಿ ಇರುವ ಒಟ್ಟು 42 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಆದೇಶವನ್ನು ನೀಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು KPWD ಅಧಿಕೃತ ಅಧಿಸೂಚನೆಯಲ್ಲಿ (KPWD Official notification) ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತರಿರುವ ಮತ್ತು KPWD ನಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಕನಿಷ್ಠ ಡಿಪ್ಲೋಮಾ ಅಥವಾ ಎಂಜಿನಿಯರಿಂಗ್ ನಲ್ಲಿ ಡಿಗ್ರಿಯನ್ನು (Degree in Engineering or Diploma) ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 21ರಿಂದ 35 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಕರ್ನಾಟಕ ಲೋಕೋಪಯೋಗಿ ಇಲಾಖೆ ನೇಮಕಾತಿ 2024 (KPWD Recruitment 2024) ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 3, 2024 ರಂದು ಆರಂಭಗೊಳ್ಳಲಿದ್ದು, ಅಭ್ಯರ್ಥಿಗಳಿಗೆ ನವೆಂಬರ್ 4, 2024 ರವರೆಗೆ ಕಾಲಾವಕಾಶ ನೀಡಲಾಗಿದೆ. KPWD ನೇಮಕಾತಿಯ ಅರ್ಜಿ ಸಲ್ಲಿಕೆಗೆ ಜನರಲ್ ವರ್ಗದ ಅಭ್ಯರ್ಥಿಗಳಿಗೆ ₹600 ರೂ., ಓ‌ಬಿ‌ಸಿ ವರ್ಗದ ಅಭ್ಯರ್ಥಿಗಳಿಗೆ ₹300 ರೂ. ಹಾಗೂ ಎಕ್ಸ್-ಸೇರ್ವಿಸ್ ಮ್ಯಾನ್ ಗೆ 50 ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಎಸ್‌ಸಿ/ಎಸ್‌ಟಿ/ಪಿ‌ಡಬ್ಲ್ಯು‌ಡಿ/ಮಹಿಳೆಯರಿಗೆ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸದರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ (Written test, ವ್ಯಕ್ತಿತ್ವ ಪರೀಕ್ಷೆ (Personality Test) ಮತ್ತು ದಾಖಲಾತಿಗಳ ಪರಿಶೀಲನೆಯನ್ನು (Document Verification) ಒಳಗೊಂಡಿರುತ್ತದೆ.

ಪ್ರಮುಖ ದಿನಾಂಕಗಳು

KPWD Recruitment 2024 ರ ಅರ್ಜಿ ಸಲ್ಲಿಕೆ ದಿನಾಂಕ ಅಕ್ಟೋಬರ್ 3, 2024 ರಂದು ಆರಂಭಗೊಳ್ಳಲಿದ್ದು, ನವೆಂಬರ್ 4, 2024 ರಂದು ಕೊನೆಗೊಳ್ಳಲಿದೆ. ಮತ್ತು, ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಯನ್ನು ನವೆಂಬರ್ 4, 2024 ರೊಳಗಾಗಿ ಮಾಡಬೇಕಾಗುತ್ತದೆ.

ಹುದ್ದೆಗಳ ವಿವರ

KPWD Recruitment 2024 ರ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಒಟ್ಟು 42 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ.

  • Assistant Executive Engineer (RPC): 30 ಹುದ್ದೆಗಳು
  • Assistant Executive Engineer (HK): 12 ಹುದ್ದೆಗಳು

KPWD Recruitment 2024 ಒಟ್ಟು 42 ಹುದ್ದೆಗಳನ್ನು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಹಂಚಲಾಗಿದೆ:

  • ಜನರಲ್: 50%
  • OBC (Cat-2A/2B/3A/3B): 27%
  • SC: 15%
  • ST: 8%

ವಿದ್ಯಾರ್ಹತೆ

KPWD Recruitment 2024 ರ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳಿಗೆ ವಿದ್ಯಾರ್ಹತೆ ಮಾನದಂಡವು ಈ ಕೆಳಗಿನಂತಿದೆ:

Assistant Executive Engineer: ಮಾನ್ಯತೆವಿರುವರುವ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಡಿಪ್ಲೋಮಾ ಅಥವಾ ಎಂಜಿನಿಯರಿಂಗ್ ಪದವಿ (Degree in Engineering or Diploma) ಪೂರ್ಣಗೊಳಿಸಿರಬೇಕು.

ವಯೋಮಿತಿ

KPWD Recruitment 2024 ರ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ, ಸದರಿ ಹುದ್ದೆಗಳ ಕನಿಷ್ಠ ವಯೋಮಿತಿಯು 21 ವರ್ಷಗಳಾಗಿದ್ದು, ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಹಾಗೂ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಳಿಕೆಯು ಈ ಕೆಳಗಿನಂತಿದೆ.

  • OBC (Cat-2A/2B/3A/3B): 3 ವರ್ಷಗಳ ಸಡಲಿಕೆ
  • SC/ST/Cat-1: 5 ವರ್ಷಗಳ ಸಡಲಿಕೆ

ವೇತನ

KPWD Recruitment 2024 ರ ಅಧಿಕೃತ ಅಧಿಸೂಚನೆಯ ಪ್ರಕಾರ, Assistant Executive Engineer ಹುದ್ದೆಯ ವೇತನ ಶ್ರೇಣಿಯು ₹83,700 – ₹1,55,200 ಪ್ರತಿಮಾಸಕ್ಕೆ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ

KPWD Recruitment 2024 ರ ಅಧಿಕೃತ ಅಧಿಸೂಚನೆಯ ಪ್ರಕಾರ, ವಿವಿಧ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು:

  • General: ₹600
  • OBC (Cat-2A/2B/3A/3B): ₹300
  • Ex-Servicemen: ₹50
  • SC/ST/Cat-I/PWD: ವಿನಾಯಿತಿ

ಆಯ್ಕೆ ಪ್ರಕ್ರಿಯೆ

KPWD Recruitment 2024 ರ ನೇಮಕಾತಿ ಪ್ರಕ್ರಿಯೆಯು ಹೀಗೆ ನಡೆಯಲಿದೆ:

  • ಲಿಖಿತ ಪರೀಕ್ಷೆ: ತಾಂತ್ರಿಕ ವಿಷಯಗಳು, ಸಾಮಾನ್ಯ ಜ್ಞಾನ ಮತ್ತು ಆಪ್ಟಿಟ್ಯೂಡ್ ಪ್ರಶ್ನೆಗಳನ್ನು ಒಳಗೊಂಡಿರುವ ಪರೀಕ್ಷೆ.
  • ವ್ಯಕ್ತಿತ್ವ ಪರೀಕ್ಷೆ: ಲಿಖಿತ ಪರೀಕ್ಷೆಯ ಬಳಿಕ ಶಾರ್ಟ್ ಲಿಸ್ಟ್ (short list) ಆದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ನಡೆಯಲಿದೆ.
  • ದಾಖಲಾತಿಗಳ ಪರಿಶೀಲನೆ: ಅಂತಿಮ ಹಂತದಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.

ಅರ್ಜಿ ಸಲ್ಲಿಕೆ

  • KPWD Recruitment 2024 ರ ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ ಮತ್ತು ವಯೋಮಿತಿ) ಪರಿಶೀಲಿಸಿ ತಾವು ತಾವು ಅರ್ಹರು ಎಂದು ಖಚಿತ ಪಡಿಸಿಕೊಳ್ಳಬೇಕು.
  • ನಂತರ ಕರ್ನಾಟಕ ಲೋಕೋಪಯೋಗಿ ಇಲಾಖೆಯ (KPWD) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
  • ಅರ್ಜಿಯ ನೋಂದಣಿ ಪೇಜ್ ತೆರೆಯುತ್ತದೆ. ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ, ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೊಂದಣಿಯನ್ನು ಮಾಡಿಸಿಕೊಳ್ಳಿ.
  • ಅರ್ಜಿ ನಮೂನೆಯನ್ನು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐ‌ಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯೂ‌ಪಿ‌ಐ ಮೂಲಕ ಪಾವತಿಸಿ.
  • ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಮುಖ ಲಿಂಕುಗಳು

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *